ಗರ್ಭಿಣಿಯರು ಯಾವ ಸಮಯದಲ್ಲಿ ಯೋಗಾಭ್ಯಾಸ ಮಾಡಬೇಕು

 

ಗರ್ಭಿಣಿಯರು ಯೋಗ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಬಿಪಿ, ಶುಗರ್ಸಮಸ್ಯೆಗಳನ್ನು ತಡೆಗಟ್ಟಬಹುದು, ಅಲ್ಲದೆ ಸಹಜ ಹೆರಿಗೆಗೆ ಯೋಗಾಸನಗಳು ಸಹಾಯ ಮಾಡುತ್ತದೆಹಾಗಾಗಿ ತುಂಬಾ ಗರ್ಭಿಣಿಯರು ಎಕ್ಸ್ಪರ್ಟ್ಬಳಿಯ ಸಲಹೆ ಸೂಚನೆಯಂತೆ ಯೋಗಾಭ್ಯಾಸ ಮಾಡುತ್ತಾರೆ.

ಮೊದಲ ತ್ರೈ ಮಾಸಿಕದಲ್ಲಿ ಯೋಗ:
ಮೊದಲ ತ್ರೈ ಮಾಸಿಕದಲ್ಲಿ ತುಂಬಾ ಯೋಗಾಭಂಗಿಗಳನ್ನು ಮಾಡಬಾರದು. ಸಮಯದಲ್ಲಿ ವೈದ್ಯರು ಕೂಡ ಹೆಚ್ಚು ಓಡಾಡಬೇಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸೂಚಿಸುತ್ತಾರೆ. ಹಾಗಾಗಿ ಅವಧಿಯಲ್ಲಿ ಯಾವುದೇ ವ್ಯಾಯಾಮ ಅಥವಾ ಕಠಿಣ ಯೋಗಾ ಭಂಗಿಗಳನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು, ಇಲ್ಲಾ ನಾನು ಮಾಡಿದ್ದೇನೆ ಎಂದು ಕೆಲವರು ಹೇಳಬಹುದು, ವ್ಯಕ್ತಿಯಿಂದ ವ್ಯಕ್ತಿಗೆ ಶರೀರದ ಆರೋಗ್ಯ ಭಿನ್ನವಾಗಿರುತ್ತದೆ. ಆದ್ದರಿಂದ ಅವಧಿಯಲ್ಲಿ ಆದಷ್ಟೂ ಸುರಕ್ಷತೆ ಕಡೆಗೆ ಗಮನಹರಿಸಬೇಕು.

ಸಮಯದಲ್ಲಿ ಧ್ಯಾನ, ನಾಡಿ ಶುದ್ಧಿಯಂಥ ವ್ಯಾಯಾಮ ಮಾಡಬಹುದು. ಕಪಾಲಭಾತಿ ಬಗೆಯ ಉಸಿರಾಟದ ವ್ಯಾಯಾಮ ಮಾಡುವಂತಿಲ್ಲ. ಸ್ವಂತವಾಗಿ ಏನನ್ನೂ ಮಾಡಿದಿರಿ, ಯೋಗಾ ಎಕ್ಸ್ಪರ್ಟ್ಇದರ ಬಗ್ಗೆ ಸಲಹೆ ನೀಡುತ್ತಾರೆ, ಅದನ್ನಷ್ಟೇ ಪಾಲಿಸಿ, ಟಿವಿ ನೋಡಿ, ಯೂಟ್ಯೂಬ್ನೋಡಿ ಯೋಗಾ ಮಾಡಲು ಹೋಗದಿರಿ.

ಎರಡನೇ
ತ್ರೈ ಮಾಸಿಕ:
ಎರಡನೇ ತ್ರೈ ಮಾಸಿಕದಲ್ಲಿ ಯೋಗಾಭ್ಯಾಸ ಪ್ರಾರಂಭಿಸಬಹುದು, ಸಮಯದಲ್ಲಿ ವಾಂತಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುತ್ತದೆ, ಅವಧಿಯಲ್ಲಿ ಟ್ವಿಸ್ಟ್ಮಾಡಬೇಡಿ, ಸಮಯದಲ್ಲಿ ಏನು ಮಾಡಬೇಕು ಎಂಬುವುದನ್ನು ಕೂಡ ವೈದ್ಯರನ್ನು ಕೇಳಿಯೇ ಮಾಡಬೇಕು.

ಮೂರನೇ ತ್ರೈ ಮಾಸಿಕ:
ಯೋಗ ಸಮಯದಲ್ಲಿ ಬಿಪಿ, ಮಧುಮೇಹದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಹಾಗಾಗಿ ಅವಧಿಯಲ್ಲಿ ಅಧಿಕ ತಕ್ಕ ಯೋಗಾಭ್ಯಾಸ ಮಾಡಿಸುತ್ತಾರೆ, ಅಲ್ಲದೆ ಸಹಜ ಹೆರಿಗೆಗೆ ಕೂಡ ಕೆಲವೊಂದು ಭಂಗಿಗಳಿವೆ ಅದನ್ನು ಯೋಗಾ ಪರಿಣಿತರ ಸಲಹೆಯಂತೆ ಮಾಡಬಹುದು.

ಗರ್ಭಿಣಿಯರು ಎಲ್ಲಾ ಸಮಯದಲ್ಲಿ ಟ್ರೈ ಮಾಡಬಹುದಾದ ಸುರಕ್ಷಿತ ಯೋಗಾಭಂಗಿಗಳು
ಚಿಟ್ಟೆಯ ಪೋಸ್
ಬೆಕ್ಕು -ಹಸುವಿನ ಪೋಸ್
ವಜ್ರಾಸನ
ಮಾಲಾಸನ